ಹೋಲಿಯಾ (ಗೋಲಾರಿ) ಹೊಲಿಯ-ಗೊಲರ (ಕನ್ನಡ) ಭಾಷೆ ಎಂಬುದು ದಕ್ಷಿಣ ದ್ರಾವಿಡ ಭಾಷೆಯಾಗಿದ್ದು, ಇದು ಕನ್ನಡಕ್ಕೆ ಸಂಬಂಧಿಸಿದೆ.ಇದು 1901 ರ ಜನಗಣತಿಯ ಪ್ರಕಾರ ಮಹಾರಾಷ್ಟ್ರದ ನಾಗ್ಪುರ್ ಮತ್ತು ಭಂಡಾರಾ ಜಿಲ್ಲೆಗಳಲ್ಲಿ (ವಿದರ್ಭ) ಮತ್ತು ಮಧ್ಯಪ್ರದೇಶದ ಸಿಯೋನಿ ಮತ್ತು ಬಾಲಾಘಾಟ್ ಜಿಲ್ಲೆಗಳಲ್ಲಿ 3,614 ಜನರಿಂದ ಮಾತನಾಡಲ್ಪಟ್ಟಿದೆ. == ಬಳಕೆ == ಈ ಭಾಷೆಯನ್ನು ಮಧ್ಯ ಪ್ರದೇಶ,ಮಹಾರಾಷ್ಟ್ರ,ಗುಜರಾತ್ ರಾಜ್ಯಗಳಲ್ಲಿ ಮಾತನಾಡುತ್ತಾರೆ . ೨೦೦೨ ಜನಗಣತಿಯ ಪ್ರಕಾರ ಈ ಭಾಷೆಯನ್ನು 500 ಜನ ಮಾತನಾಡುತ್ತಾರೆ. ಈ ಭಾಷೆಯ ಪಳುವಳಿಕೆಗಳು ಗೊಂಡ ಬುಡಕಟ್ಟಿನ ಮಧ್ಯ ಭಾರತದ ಸಾತಪುಡ ಪರ್ವತ ಶ್ರೇಣಿಯ ನರ್(ಗಂಡು)+ಮಾದಾ (ಹೆಣ್ಣು)>ನರ್ಮದಾ, ವೇನ್(ಜನ)-ಪೇನ್(ದೈವ)ಗಂಗಾ ನದಿ ಜಲಾನಯನದಲ್ಲಿ ವಾಸವಾಗಿದ್ದ ಗೊಂಡ ಬುಡಕಟ್ಟಿನ ಹೊಲಿಯ-ಗೊಲರ (ಕೃಷಿಕ-ಪಶುಪಾಲಕ) ಸಮುದಾಯಗಳಲ್ಲಿ ಕಾಣಸಿಗುತ್ತವೆ. ಈ ಭಾಷೆಯು ಕನ್ನಡ ನಾಡಿನ ಗೋದಾವರಿ ಜಲಾನಯನದ ಬೀದರ ಜಿಲ್ಲೆಯ ಕನ್ನಡ ಭಾಷೆಗೆ ಹೆಚ್ಚು ಹೋಲುತ್ತದೆ. == ಉಲ್ಲೇಖಗಳು ==